Movies

ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್?

ರಜನಿಕಾಂತ್ (Rajinikanth) ನಟನೆ

ಯ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ಗಳು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಶಿವಣ್ಣ ನಟಿಸೋದು ಅಧಿಕೃತವಾಗಿದೆ. ಈ ಬೆನ್ನಲ್ಲೇ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಕೂಡ ತಲೈವಾ ಜೊತೆ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ- ‘‌ಎಕ್ಕ’ ಚಿತ್ರದ ಟೀಸರ್‌ ಔಟ್

ಕೇರಳದಲ್ಲಿ ‘ಜೈಲರ್ 2’ಗಾಗಿ ತಲೈವಾ ಟೀಮ್ ಕೆಲದಿನಗಳಿಂದ ಬೀಡು ಬಿಟ್ಟಿದೆ. ಸದ್ಯದಲ್ಲೇ ಶಿವಣ್ಣ ಕೂಡ ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಈ ಸಿನಿಮಾ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಸಿನಿಮಾದ ಪಾತ್ರವೊಂದಕ್ಕಾಗಿ ನಟಿಸಲು ಚಿತ್ರತಂಡ ‘ಪುಷ್ಪ 2’ (Pushpa 2) ಖ್ಯಾತಿಯ ಫಹಾದ್ ಫಾಸಿಲ್ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಕಥೆ ಮತ್ತು ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಈ ಸುದ್ದಿ ನಿಜನಾ, ಈ ಚಿತ್ರದಲ್ಲಿ ಅವರು ನಟಿಸುತ್ತಾರಾ ಎಂಬುದನ್ನು ಚಿತ್ರತಂಡವೇ ಅಫಿಷಿಯಲ್ ಆಗಿ ತಿಳಿಸಬೇಕಿದೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ

ಈಗಾಗಲೇ ‘ವೆಟ್ಟೈಯಾನ್‌’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಫಹಾದ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಹಾಗಾಗಿ ‘ಜೈಲರ್ 2’ನಲ್ಲಿಯೂ ಫಹಾದ್ ನಟಿಸಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.

Related posts

Candace Cameron Bure, Lori Loughlin and Other Celebs That Are Totally BFFs

salesreddys@gmail.com

“This Is Us” Makes Mandy Moore & Milo Ventimiglia Cry Buckets

salesreddys@gmail.com

Haavyas: A Short Film Triumph by Swapnil Manoharao Nominated Best story Award

salesreddys@gmail.com

Leave a Comment